About me

Doctor by profession- Anaesthetist by specialization.Studies all over Karnataka from Bellary to Shimoga to Tumkur to Bangalore in my early years up till Pre university. Medicine in Bangalore medical college and MD specialisation in anaesthesia at the Postgraduate Institute, Chandigarh. Presently working in UK as a consultant Anaesthetist. Kannada literature is my interest and also listen to light music. I am an ardent fan of Dr.P.B.Srinivas. Philosophy and Hindu mythology are my other intersts Favourite writers are S.L Bhyrappa, K.N.Ganeshaih, ,DVG, A.R.Krishnashastry and Kum.Veerabhadrappa. I also like Ayn Rand as an English writer but have read only limited English literature. Mathematics and Science studies are my other interests.

ಸುದರ್ಶನ ಗುರುರಾಜರಾವ್ ನನ್ನ ಹೆಸರು. ವೃತ್ತಿಯಿಂದ ವೈದ್ಯ- ಅರಿವಳಿಕೆ ತಜ್ಞ.
ಕರ್ನಾಟಕದ ಬಳ್ಳಾರಿ,ಶಿವಮೊಗ್ಗ,ತುಮಕೂರು, ಬೆಂಗಳೂರು ಜಿಲ್ಲೆಗಳ ಹಳ್ಳಿಗಳಲ್ಲಿ ಪ್ರಾಥಮಿಕ, ಮಧ್ಯಮ ಹಾಗು ಪ್ರೌಢ ಶಿಕ್ಷಣ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರು ವೈದ್ಯಕೀಯ ವಿದ್ಯಾಲಯದಲ್ಲಿ ವೈದ್ಯಕೀಯ ತರಬೇತಿ ಮುಗಿಸಿ ಚಂಡೀಗಢದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಇಂಗ್ಲೆಂಡಿನಲ್ಲಿ ಅರಿವಳಿಕೆ ತಜ್ಞನಾಗಿ ಕೆಲಸ ಮಾಡುತ್ತಿದ್ದೇನೆ.
ಪ್ರವೃತ್ತಿಗಳು ಹಲವು. ಸಾಹಿತ್ಯ, ಲಘು ಸಂಗೀತ, ವಿಜ್ಞಾನ, ಗಣಿತ,ಕುರಿತ ವಿಷಯಗಳನ್ನು ಕುರಿತು ಓದುವುದು. ಕಲಿಕಾಕ್ರಮ ಹಾಗು ಬೋಧನೆಯಲ್ಲಿಯು ನನಗೆ ಆಸಕ್ತಿ ಉಂಟು.
ಇತ್ತೀಚೆಗೆ ಸ್ನೇಹಿತರ ಪ್ರೋತ್ಸಾಹದಿಂದ ಕಥೆ, ಕವನ, ಹರಟೆ ಮೊದಲಾದ ಲೇಖನಗಳನ್ನು ಬರೆಯುತ್ತಿದ್ದೇನೆ; ಅದಕಾಗಿ ಈ ಬ್ಲಾಗ್.
ಎಸ್.ಎಲ್.ಭೈರಪ್ಪ ನನ್ನ ಅತಿ ಮೆಚ್ಚಿನ ಲೇಖಕರು. ಡಿ.ವಿ.ಜಿ, ಕೃಷ್ಣಶಾಸ್ತ್ರಿ, ಕುಂ.ವೀರಭದ್ರಪ್ಪ ಮತ್ತು ಕೆ.ಎನ್.ಗಣೇಶಯ್ಯ ಹೊಸ ಲೇಖಕರಲ್ಲಿ ನನಗೆ ಇಷ್ಟವಾದವರು.
ಪಿ.ಬಿ.ಶ್ರೀನಿವಾಸ್ ನನ್ನ ಮೆಚ್ಚಿನ ಗಾಯಕ ಹಾಗು ಎಸ್. ಜಾನಕಿ ನನ್ನ ಮೆಚ್ಚಿನ ಗಾಯಕಿ. ಕನ್ನಡ ಹಳೆಯ ಹಾಡುಗಳು ನನ್ನ ಗುಂಗು.
ಇಂಗ್ಲಿಷಿನ ವಿಷಯಕ್ಕೆ ಬಂದರೆ, ಅಯ್ನ್ ರ್ಯಾಂಡ್ ನನ್ನ ಮೆಚ್ಚಿನ ಲೇಖಕಿ.
ಭಾರತೀಯ ಸಂಸ್ಕೃತಿ, ತತ್ವಶಾಸ್ತ್ರ, ಪುರಾಣಗಳಲ್ಲಿ ನನಗೆ ಬಹಳ ಆಸಕ್ತಿ. ಕನ್ನಡ ನನ್ನುಸಿರು!!

Leave a comment